ಕರಿಕ್ಕಳ: ಕಬ್ಬು ಜ್ಯೂಸ್ ಮೆಷಿನ್ ಕಳವಿಗೆ ವಿಫಲ ಯತ್ನ: ಎರಡು ಕಡೆಗಳಲ್ಲಿ ಕೃತ್ಯಕ್ಕೆ ಸಂಶಯ

 

Ad
ಕರಿಕ್ಕಳ ಮತ್ತು ನಿಂತಿಕಲ್ಲು ಪ್ರದೇಶಗಳಲ್ಲಿ ಕಬ್ಬು ಜ್ಯೂಸ್ ಮಾರಾಟದ ಯಂತ್ರಗಳನ್ನು (ಮೆಷಿನ್) ಕಳ್ಳತನ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದು ಕಳ್ಳರ ಹೊಸ ಬಗೆಯ ಸಂಚಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Ad


 ಕರಿಕ್ಕಳ ನಿವಾಸಿ ಕುಸುಮಾಧರ ಎಂಬುವರಿಗೆ ಸೇರಿದ ಕಬ್ಬು ಜ್ಯೂಸ್ ಮೆಷಿನ್ ಮತ್ತು ಅದು ಇರಿಸಿದ್ದ ಗೂಡು ಅಕ್ಟೋಬರ್ 29 ರಂದು ಸಂಪೂರ್ಣವಾಗಿ ನೆಲಕ್ಕೆ ಬಿದ್ದಿರುವುದು ಅವರ ಗಮನಕ್ಕೆ ಬಂದಿದೆ. ಆರಂಭದಲ್ಲಿ ಇದು ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಸಂಶಯಿಸಲಾಗಿತ್ತು.

 ಆದರೆ, ಈ ಘಟನೆ ನಡೆದ ರಾತ್ರಿ ಅಂದರೆ ಅಕ್ಟೋಬರ್ 28 ರಂದು ರಾತ್ರಿ, ಹತ್ತಿರದ ನಿಂತಿಕಲ್ಲು ಸಮೀಪದಲ್ಲಿರುವ ಮತ್ತೊಂದು ಕಬ್ಬು ಜ್ಯೂಸ್ ಮೆಷಿನ್ ಗೂಡಿನ ಚಕ್ರಗಳಿಗೆ ಆಧಾರಕ್ಕಾಗಿ ಇರಿಸಿದ್ದ ಕಲ್ಲುಗಳನ್ನು ತೆಗೆದು ಹಾಕಿರುವುದು ಕಂಡುಬಂದಿದೆ.

ಪೊಲೀಸರ ಪ್ರಾಥಮಿಕ ತನಿಖೆ ಮತ್ತು ಪರಿಶೀಲನೆಯ ನಂತರ, ಈ ಎರಡೂ ಕಡೆಗಳಲ್ಲಿ ಕಬ್ಬು ಜ್ಯೂಸ್ ಮೆಷಿನ್‌ಗಳನ್ನು ಸಾಗಿಸಲು ಪ್ರಯತ್ನಿಸಿ ವಿಫಲರಾಗಿರುವ ಕಳ್ಳತನ ಯತ್ನದ ಸಂಶಯ ಬಲವಾಗಿದೆ. ಮೆಷಿನ್‌ಗಳನ್ನು ಸಾಗಿಸಲು ಸಾಧ್ಯವಾಗದೆ ಕಳ್ಳರು ಕೃತ್ಯವನ್ನು ಅರ್ಧಕ್ಕೆ ಕೈಬಿಟ್ಟಿರುವುದು ಕಂಡುಬಂದಿದೆ.

ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳತನಕ್ಕೆ ಯತ್ನಿಸಿದ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

For Advertisement Contact:


Would you like to promote your business, service, or product on our sathyapatha news plus website?

https://sathyapathanewsplus.blogspot.com

Please contact for advertisements: 9880834166 / WhatsApp

Post a Comment

0 Comments