ಮೆಲ್ಕಾರ್: ಡಿವೈಡರ್‌ಗೆ ಕಾರ್ ಡಿಕ್ಕಿ; ಚಾಲಕ ಸ್ಥಳದಲ್ಲೇ ಸಾವು

 

Ad

Ad


ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳದ ಮೆಲ್ಕಾರ್ ಬಳಿ ಕಾರೊಂದು ಡಿವೈಡರ್‌ಗೆ ಅಪ್ಪಳಿಸಿದ ಪರಿಣಾಮ, ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ದಾರುಣ ಘಟನೆ ಅಕ್ಟೋಬರ್ 28 ರಂದು ರಾತ್ರಿ ಸಂಭವಿಸಿದೆ.

Ad


 ಮೃತಪಟ್ಟ ಚಾಲಕನನ್ನು ಸವಣೂರು ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ.

ಕಾರ್ತಿಕ್ ಅವರು ಚಲಾಯಿಸುತ್ತಿದ್ದ ಕಾರು, ನೂತನವಾಗಿ ನಿರ್ಮಾಣಗೊಂಡಿರುವ ಮೆಲ್ಕಾರ್ ಎಲಿವೇಟೆಡ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ (ಡಿವೈಡರ್‌ಗೆ) ಅಪ್ಪಳಿಸಿದೆ.

 ಈ ಅಪಘಾತದ ತೀವ್ರತೆಯಿಂದಾಗಿ ಕಾರ್ತಿಕ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

  ಕಾರಿನಲ್ಲಿದ್ದ ಇತರ ನಾಲ್ವರು ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



For Advertisement Contact:

Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp

Post a Comment

0 Comments