ಬಜಪೆ ಸುಹಾಸ್ ಶೆಟ್ಟಿ ಹತ್ಯೆ: NIA ಚಾರ್ಜ್‌ಶೀಟ್‌ನಲ್ಲಿ 'PFI' ಕೈವಾಡ ದೃಢ; ಸ್ಫೋಟಕ ಸಂಚು ಬಯಲು!

 

Ad
ಕಳೆದ ಮೇ 1 ರಂದು ಮಂಗಳೂರಿನ ಬಜಪೆ ಸಮೀಪ ನಡೆದಿದ್ದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಇದೀಗ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಈ ಚಾರ್ಜ್‌ಶೀಟ್‌ನಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯ ಸದಸ್ಯರ ಕೈವಾಡ ಸ್ಪಷ್ಟವಾಗಿದೆ ಎಂಬ ಸ್ಫೋಟಕ ಅಂಶಗಳನ್ನು NIA ಉಲ್ಲೇಖಿಸಿದೆ.


 

Ad

 ಹತ್ಯೆಯು ದಕ್ಷಿಣ ಕನ್ನಡದಲ್ಲಿ ತೀವ್ರ ಸ್ವರೂಪ ಪಡೆದು ಬಂದ್‌ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಪ್ರಕರಣದ ಗಂಭೀರತೆ ಮತ್ತು ಉಗ್ರ ಸಂಘಟನೆಗಳ ಕೈವಾಡದ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ಪ್ರಕರಣವನ್ನು NIA ಗೆ ಹಸ್ತಾಂತರಿಸಲಾಗಿತ್ತು.

 ಚಾರ್ಜ್‌ಶೀಟ್ ಸಲ್ಲಿಕೆ: ಬೆಂಗಳೂರಿನ NIA ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ.

NIA ತನಿಖೆಯಿಂದ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಅತಿದೊಡ್ಡ ಮತ್ತು ಯೋಜಿತ ಸಂಚು ಇರುವುದು ಬಹಿರಂಗಗೊಂಡಿದೆ. ಹತ್ಯೆಗೆ ಮೊದಲು ಆರೋಪಿಗಳ ತಂಡವು ಸುಹಾಸ್‌ ಶೆಟ್ಟಿಯ ಚಟುವಟಿಕೆಗಳ ಮೇಲೆ ಹಲವು ತಿಂಗಳ ಕಾಲ ಕಣ್ಣಿಟ್ಟಿತ್ತು.

 ವಿವರವಾದ ಯೋಜನೆ: ಹತ್ಯೆ ಮಾಡುವ ಸ್ಥಳ, ವಿಧಾನ, ತಪ್ಪಿಸಿಕೊಂಡರೆ ಅನುಸರಿಸಬೇಕಾದ ಕ್ರಮಗಳು ಮತ್ತು ಪ್ರತಿದಾಳಿಯಾದರೆ ಎದುರಿಸುವುದು ಹೇಗೆ ಎಂಬ ಬಗ್ಗೆ ಪೂರ್ವಭಾವಿ ಪ್ಲಾನ್ ಮಾಡಲಾಗಿತ್ತು ಎಂದು ಚಾರ್ಜ್‌ಶೀಟ್ ತಿಳಿಸಿದೆ.

 ಹತ್ಯೆಯ ರೀತಿ: ಸುಹಾಸ್‌ ಶೆಟ್ಟಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರನ್ನು ಉದ್ದೇಶಪೂರ್ವಕವಾಗಿ ಹಿಂಬಾಲಿಸಿ ಡಿಕ್ಕಿ ಹೊಡೆಯಲಾಗಿತ್ತು. ನಂತರ ಇನ್ನೊಂದು ವಾಹನದಿಂದ ಮುಂಭಾಗದಲ್ಲಿ ತಡೆ ಒಡ್ಡಿ, ಅವರು ತಪ್ಪಿಸಿಕೊಳ್ಳದಂತೆ ಸಂಚು ರೂಪಿಸಿ ಕೊಲೆ ಮಾಡಲಾಗಿತ್ತು. ಹತ್ಯೆಗಾಗಿ ಆರೋಪಿಗಳು ಎರಡು ಕಾರುಗಳನ್ನು ಬಳಸಿರುವುದು ದೃಢಪಟ್ಟಿದೆ.

 ಸಂಚಿನ ರೂವಾರಿ: ಹತ್ಯೆ ಸಂಚಿನ ಮುಖ್ಯ ರೂವಾರಿ ಅಬ್ದುಲ್ ಸಫ್ಘಾನ್ ಅಲಿಯಾಸ್ ಕಳವಾರು ಸಫ್ಘಾನ್ ಎಂದು ಗುರುತಿಸಲಾಗಿದೆ. ಈತ ನಿಷೇಧಿತ PFI ಸಂಘಟನೆಯ ಮಾಜಿ ಸದಸ್ಯನಾಗಿದ್ದು, ಈ ಘಟನೆಯು ನಿಷೇಧದ ನಂತರವೂ PFI ಸಂಘಟನೆ ಸಕ್ರಿಯವಾಗಿದೆ ಎಂಬುದನ್ನು ರುಜುವಾತುಪಡಿಸಿದೆ.

  ಸಹಕರಿಸಿದವರು: ಕಳವಾರು ಸಫ್ಘಾನ್‌ಗೆ ನಿಯಾಜ್ ಅಲಿಯಾಸ್ ನಿಯಾ, ಮಹಮ್ಮದ್ ಮುಸಾಮಿರ್‌, ಮಹಮ್ಮದ್ ಅಲಿಯಾಸ್‌ ಮುಜಮ್ಮಿಲ್, ನೌಶಾದ್ ಅಲಿಯಾಸ್‌ ವಾಮಂಜೂ‌ರ್ ನೌಶಾದ್, ಮತ್ತು ಆದಿಲ್‌ ಮಹರೂಫ್ ಸೇರಿದಂತೆ ಇತರ PFI ಸದಸ್ಯರು ಸಹಕಾರ ನೀಡಿದ್ದಾರೆ.

 ಹಣಕಾಸು ನೆರವು: ಆರೋಪಿ ಆದಿಲ್ ಮಹರೂಫ್ (ಅಲಿಯಾಸ್ ಆದಿಲ್) ಈ ಸಂಪೂರ್ಣ ಸಂಚಿಗೆ ಹಣಕಾಸು ನೆರವು ಒದಗಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ಇವರಲ್ಲದೆ, ಕಲಂದರ್ ಶಾಫಿ, ಎಂ. ನಾಗರಾಜ, ರಂಜಿತ್, ಮಹಮ್ಮದ್ ರಿಜ್ವಾನ್, ಅಜರುದ್ದೀನ್, ಅಬ್ದುಲ್ ಖಾದರ್ ಸೇರಿದಂತೆ ಒಟ್ಟು ಹತ್ತುಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಮತ್ತೊಬ್ಬ ಆರೋಪಿ ಅಬ್ದುಲ್ ರಜಾಕ್ ವಿರುದ್ಧ ತನಿಖೆ ಮುಂದುವರಿದಿದೆ.


ಈ ಹತ್ಯೆಯು ನಿಷೇಧಿತ PFI ಸಂಘಟನೆಯು ದೇಶದಲ್ಲಿ ಸಕ್ರಿಯವಾಗಿರುವ ಸ್ಲೀಪರ್ ಸೆಲ್‌ಗಳ (Sleeper Cells) ಮೂಲಕ ಕಾರ್ಯಾಚರಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅಲ್ಲದೆ, ತನಿಖೆಯಲ್ಲಿ ದೇಶದಾದ್ಯಂತ ಇನ್ನಷ್ಟು ಹಿಂದೂ ಮುಖಂಡರನ್ನು ಗುರಿಯಾಗಿಸಿ ಹತ್ಯೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂಬ ಆತಂಕಕಾರಿ ವಿಷಯ ಕೂಡ ಪತ್ತೆಯಾಗಿದೆ.


Post a Comment

0 Comments