ಮಂಗಳೂರು: ಸಂಘಟನೆಯಿಂದ ಸಾಮಾಜಿಕ ಬಲವರ್ಧನೆ ಸಾಧ್ಯವಿದ್ದು, ಸಂಘಟನೆಯೊಂದು ಸಮಾಜಮುಖಿಯಾದ ತನ್ನ ಚಿಂತನೆಗಳಲ್ಲಿ ರಚನಾತ್ಮಕತೆಯನ್ನು ಅಳವಡಿಸಿ ಕೊಳ್ಳಬೇಕು ಮತ್ತು ಯುವ ಜನಾಂಗ ಒಟ್ಟಾಗಬೇಕು ಸಮಾಜ ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಮತ್ತು ಸಮಾಜಕ್ಕೆ ಮಾದರಿಯಾಗಬೇಕು ಎಂದು ಗೆಜ್ಜೆಗಿರಿಯ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ರವಿ ಪೂಜಾರಿ ಚಿಲಿಂಬಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇವರು ಯುವವಾಹಿನಿ ಕಂಕನಾಡಿ ಘಟಕದ ಸಹಯೋಗದಲ್ಲಿ ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸಂಘಟನೆಗಳ ಬಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದರು.
ಯುವವಾಹಿನಿ ಕಂಕನಾಡಿ ಘಟಕ ಅಧ್ಯಕ್ಷ ರಾಹುಲ್ ಸನೀಲ್ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪದಪ್ರಧಾನ ನೆರವೇರಿಸಿದರು. ಮತ್ತು ಅವರು ತನ್ನ ಮಾತಿನಲ್ಲಿ ನಮ್ಮ ಘಟಕದ ಇಂದಿನ ವರುಷದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಕಾರ್ಯಕಾರಿ ಸಮಿತಿಯು ಇನ್ನು ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಆಗಲಿ ಎಂದು ಶುಭ ಹಾರೈಸಿದರು.
ನಂತರ ಆಯ್ಕೆಯಾದ ಹಲವು ಘಟಕಗಳು ಪದಾದಿಕಾರಿಗಳಿಂದ ಶುಭ ಹಾರೈಕೆಗಳು ಮಾಡಿ ಬಂದವು. ಸಂದ್ಯ ಶೋಧನ್, ಬ್ರಹ್ಮ ಮುಗೇರ ಮಹಾಂಕಾಳಿ ಸೇವಾ ಸಮಿತಿ ಉಜ್ಜೋಡಿ ಇದರ ಅಧ್ಯಕ್ಷ ಉಮನಾಥ್ ಕೋಟ್ಯಾನ್, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಉಮೇಶ್ ಪೂಜಾರಿ ಪುತ್ತೂರು ಸೇರಿದಂತೆ ಹಲವರು ಗಣ್ಯರು ಉಪಸ್ಥಿತಿ ಇದ್ದರು. ಯುವವಾಹಿನಿ ಕಂಕನಾಡಿ ಘಟಕದ ನೂತನ ಅಧ್ಯಕ್ಷರಾಗಿ ಸುರೇಖ ಮೋಹನ್ ಹಾಗೂ ಕಾರ್ಯದರ್ಶಿಯಾಗಿ ಧನುಷ್ ಕುಮಾರ್ ಅವರು ಆಯ್ಕೆಯಾದರು. ಧನುಷ್ ಕುಮಾರ್ ವಂದಿಸಿದರು. ಮೇಘ ಹಾಗೂ ವೀಣ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments