ಬುಧವಾರ (ನವೆಂಬರ್ 19) ಮಧ್ಯರಾತ್ರಿ ನಡೆದ 'ದೇವಿ ಮಹಾತ್ಮೆ' ಪ್ರಸಂಗದಲ್ಲಿ ಈಶ್ವರ ಗೌಡರು ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಪಾತ್ರವನ್ನು ಯಶಸ್ವಿಯಾಗಿ ಪೂರೈಸಿ, ಬಣ್ಣದ ಮನೆಯಲ್ಲಿ ಸಂಪೂರ್ಣ ವೇಷವನ್ನು ಕಳಚುವ ಮುನ್ನವೇ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣವೇ ಸಹ ಕಲಾವಿದರು ಮತ್ತು ಆಯೋಜಕರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ದುರದೃಷ್ಟವಶಾತ್ ಆಸ್ಪತ್ರೆ ತಲುಪುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
ಮೂಲತಃ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದ ಈಶ್ವರ ಗೌಡರು, ಅಪಾರ ಕಲಾಸೇವೆಯನ್ನುಗೈದಿದ್ದರು. ವಿಶೇಷವೆಂದರೆ, ಇವರ ತಂದೆ ಕೂಡ ಇದೇ ಮೇಳದಲ್ಲಿ ವೇಷಧಾರಿಯಾಗಿದ್ದರು ಎಂಬುದು ಗಮನಾರ್ಹ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕಲೆಗೆ ಬಣ್ಣ ಹಚ್ಚಿದಾಗಲೇ ಕಲಾವಿದನ ಬದುಕು ಅಂತ್ಯವಾಗಿರುವುದು ಸಹ ಕಲಾವಿದರು ಹಾಗೂ ಅಭಿಮಾನಿಗಳಲ್ಲಿ ತೀವ್ರ ನೋವುಂಟುಮಾಡಿದೆ.

0 Comments