ಸುಬ್ರಹ್ಮಣ್ಯ: ಜಾಗದ ತಕರಾರು; ಕತ್ತಿಯಿಂದ ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲು

 

Ad
ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ನವೆಂಬರ್ 19ರಂದು ನಡೆದಿದ್ದು, ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲಮೊಗ್ರದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆರೋಪಿ ಭರತ್ ಶಿವಾಲ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಇವರಿಬ್ಬರ ನಡುವೆ ಹಲವು ಸಮಯಗಳಿಂದ ಜಾಗದ ವಿಷಯವಾಗಿ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ.

ಘಟನೆಯ ವಿವರದಂತೆ, ನವೆಂಬರ್ 17ರಂದು ಭರತ್ ಅವರು ರಸ್ತೆ ಅಗಲೀಕರಣ ಮಾಡಿದ್ದರು. ನವೆಂಬರ್ 19ರಂದು ವಿಶ್ವನಾಥ ರೈ ಅವರು ತಮ್ಮ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ, ಅದನ್ನು ತೆಗೆಯುವ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಈ ವೇಳೆ ಭರತ್ ಅವರು ಕತ್ತಿಯಿಂದ ವಿಶ್ವನಾಥ ರೈ ಅವರ ಎಡ ಕಿವಿ ಹಾಗೂ ಎಡ ಕೈಗೆ ಕಡಿದು ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ವಿಶ್ವನಾಥ ರೈ ಅವರು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Post a Comment

0 Comments