🔥 "ಕಬಡ್ಡಿ ಅಬ್ಬರ ಮತ್ತೆ ಬಂದಿದೆ - ಸೀಸನ್ 12 ಪ್ರಾರಂಭಕ್ಕೆ ಕೌಂಟ್‌ಡೌನ್ ಶುರು"📣

Pro Kabaddi

 ರಾಷ್ಟ್ರೀಯ ಕ್ರೀಡಾ ದಿನದಂದು (ಆಗಸ್ಟ್ 29) ಕ್ರೀಡಾ ಕ್ಷೇತ್ರದ ಅಗ್ರಗಣ್ಯರು ಒಟ್ಟುಗೂಡಿ ಪ್ರೊ ಕಬಡ್ಡಿ ಲೀಗ್ ಸೀಸನ್ 12ನ್ನು ಭವ್ಯವಾಗಿ ಪ್ರಾರಂಭಿಸಲು ಸಜ್ಜಾಗಿದೆ.


ಪದ್ಮಭೂಷಣ ಪ್ರಶಸ್ತಿ ವಿಜೇತ ಮತ್ತು ಭಾರತೀಯ ಬ್ಯಾಡ್ಮಿಂಟನ್ ದಿಗ್ಗಜ ಪುಲ್ಲೇಲ ಗೋಪಿಚಂದ್, ಹಾಕಿ ದಿಗ್ಗಜ ಹಾಗೂ ಮಾಜಿ ಭಾರತೀಯ ಹಾಕಿ ನಾಯಕ ಧನರಾಜ್ ಪಿಳ್ಳೈ, ಕಬಡ್ಡಿ ಐಕಾನ್ ಪರದೀಪ್ ನರ್ವಾಲ್, ಹಾಗೂ ರಾಜಸ್ಥಾನ ರಾಯಲ್ಸ್‌ನ ಉದಯೋನ್ಮುಖ ತಾರೆ ವೈಭವ್ ಸುರ್ಯವಂಶಿ ವೇದಿಕೆ ಹಂಚಿಕೊಂಡು ಪ್ರೊ ಕಬಡ್ಡಿ  12 ಸೀಸನ್ ಆರಂಭ ಘೋಷಿಸಿದ್ದಾರೆ.


 ಇಂದು ರಾಷ್ಟ್ರೀಯ ಕ್ರೀಡಾ ದಿನದಂದು ಪ್ರೊ ಕಬಡ್ಡಿ ಲೀಗ್ ಸೀಸನ್ ಆರಂಭಗೊಳ್ಳುವುದು ನಮ್ಮ ಹೆಮ್ಮೆಯ ಸಂಗತಿ.

ಸೀಸನ್ 12ರ ಹೊಸ ವೈಶಿಷ್ಟ್ಯಗಳು:

ಈ ಬಾರಿ ಪ್ರತಿಯೊಂದು ಪಂದ್ಯಕ್ಕೂ ಫಲಿತಾಂಶ ಇರಲಿದೆ. ಸಮಬಲದಲ್ಲಿ ಅಂತ್ಯಗೊಂಡರೆ ಟೈಬ್ರೇಕರ್ ಮೂಲಕ ಗೆದ್ದವರನ್ನು ಘೋಷಿಸಲಾಗುತ್ತದೆ.

ಪ್ಲೇ-ಆಫ್‌ಗೂ ಮುನ್ನ ಪ್ಲೇ-ಇನ್ ಹಂತವನ್ನು ಸೇರಿಸಲಾಗಿದೆ.

ಟಾಪ್ 2 ತಂಡಗಳು ನೇರವಾಗಿ ಪ್ಲೇ-ಆಫ್‌ಗೆ ಪ್ರವೇಶ ಪಡೆಯುತ್ತವೆ.

3ನೇ ಮತ್ತು 4ನೇ ಸ್ಥಾನಗಳ ತಂಡಗಳು ಮಿನಿ-ಕ್ವಾಲಿಫೈಯರ್ ಆಡುತ್ತವೆ.

5ರಿಂದ 8ನೇ ಸ್ಥಾನಗಳ ತಂಡಗಳು ಪ್ಲೇ-ಇನ್ ಪಂದ್ಯಗಳಲ್ಲಿ ಮುಖಾಮುಖಿಯಾಗುತ್ತವೆ.


ಸೀಸನ್ 12 ಆಗಸ್ಟ್ 29ರಂದು ಭರ್ಜರಿ ಸೌತ್ ಡರ್ಬಿಯಿಂದ ಆರಂಭವಾಗಲಿದೆ – ತೆಲುಗು ಟೈಟನ್ಸ್ ವಿರುದ್ಧ ತಮಿಳ್ ತಳೈವಾಸ್.ಹಾಗೂ ಬೆಂಗಳೂರು ಬುಲ್ಸ್ ವಿರುದ್ಧ ಪುನೇರಿ ಪಲ್ಟಾನ್.

ಪ್ರೊ ಕಬಡ್ಡಿ ಲೀಗ್ – ಸೀಸನ್‌ವಾರು ವಿಜೇತರು

ಸೀಸನ್ ವರ್ಷ ಗೆದ್ದ ತಂಡ (ಚಾಂಪಿಯನ್)

ಸೀಸನ್ 1  2014 - ಜೈಪುರ ಪಿಂಕ್ ಪ್ಯಾಂಥರ್ಸ್

ಸೀಸನ್ 2  2015 - ಯು ಮುಂಬಾ

ಸೀಸನ್ 3  2016 (ಜನವರಿ) - ಪಟ್ನಾ ಪೈರೇಟ್ಸ್

ಸೀಸನ್ 4  2016 (ಜೂನ್) - ಪಟ್ನಾ ಪೈರೇಟ್ಸ್

ಸೀಸನ್ 5  2017 - ಪಟ್ನಾ ಪೈರೇಟ್ಸ್

ಸೀಸನ್ 6  2018–19 - ಬೆಂಗಳೂರು ಬುಲ್ಸ್

ಸೀಸನ್ 7  2019 - ಬೆಂಗಾಲ್ ವಾರಿಯರ್ಸ್

ಸೀಸನ್ 8  2021–22 - ದಬಾಂಗ್ ದೆಹಲಿ ಕೆ.ಸಿ.

ಸೀಸನ್ 9  2022 - ಜೈಪುರ ಪಿಂಕ್ ಪ್ಯಾಂಥರ್ಸ್

ಸೀಸನ್ 10  2023–24 - ಪುಣೇರಿ ಪಲ್ಟನ್

ಸೀಸನ್ 11  2024 - ಹರಿಯಾಣ ಸ್ಟೀಲರ್ಸ್

ಪಟ್ನಾ ಪೈರೇಟ್ಸ್ – ಸತತ 3 ಬಾರಿ (ಸೀಸನ್ 3, 4, 5) ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್ – ಎರಡು ಬಾರಿ (ಸೀಸನ್ 1 ಮತ್ತು 9) ಟೈಟಲ್ ಗೆದ್ದಿದ್ದಾರೆ.

ಯು ಮುಂಬಾ, ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ದಬಾಂಗ್ ದೆಹಲಿ, ಪುಣೇರಿ ಪಲ್ಟನ್, ಹರಿಯಾಣ ಸ್ಟೀಲರ್ಸ್ – ತಲಾ ಒಂದು ಬಾರಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ.



Post a Comment

0 Comments