ಉಡುಪಿ ಜಿಲ್ಲೆಯ ಬ್ರಹ್ಮಾವರದ ಆರೂರು ಗ್ರಾಮದ ವಿದುಷಿ ದೀಕ್ಷಾ – ಭರತನಾಟ್ಯದ ವೇದಿಕೆಯಲ್ಲಿ ಅಸಾಧ್ಯ ಸಾಧನೆ ಮಾಡಿದರೆ!.
ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರು ಇತ್ತೀಚೆಗೆ ಮಾಡಿದ 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನದ ದಾಖಲೆಯನ್ನು ದೀಕ್ಷಾ ಅವರು ಗುರುವಾರ ಸಂಜೆ 5.30ಕ್ಕೆ ಅಧಿಕೃತವಾಗಿ ಮುರಿದರು.
ಈ ಸಾಧನೆಗೆ ಸಾಕ್ಷಿಯಾಗಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಹೇಳಿದರು – “ಗ್ರಾಮೀಣ ಹಿನ್ನಲೆಯಲ್ಲಿ ಬಂದ ದೀಕ್ಷಾ ವಿಶ್ವದ ವೇದಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. 170 ಗಂಟೆಗಳ ಹಿಂದಿನ ದಾಖಲೆಯನ್ನು ಅವರು ಅಧಿಕೃತವಾಗಿ ಮುರಿದಿದ್ದಾರೆ” ಎಂದು.ಎಂದು ಘೋಷಿಸಿದರು.
ದೀಕ್ಷಾ ಅವರು ಆಗಸ್ಟ್ 21ರಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದು, ಒಟ್ಟು 216 ಗಂಟೆಗಳ ಗುರಿಯನ್ನು ಹೊಂದಿದ್ದಾರೆ. ಅವರು ಇನ್ನಷ್ಟು ಎಷ್ಟು ಕಾಲ ನೃತ್ಯ ಮುಂದುವರಿಸುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಉಡುಪಿಯ ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ 170 ಗಂಟೆಗಳ ದಾಖಲೆಯನ್ನು ಪೂರೈಸಿದಾಗ ನೆರೆದಿದ್ದವರು ಹೂಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು
ಈಗ ಕರಾವಳಿಯ ‘ಗೋಲ್ಡನ್ ಹುಡುಗಿ’ ವಿಶ್ವದ ಗಮನ ಸೆಳೆಯುತ್ತಿರುವ ಹೆಮ್ಮೆ ನಮ್ಮದಾಗಿದೆ..

0 Comments