ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಬಳಕೆ ಹೆಚ್ಚಿದಂತೆ ಆನ್‌ಲೈನ್ ಆಟಗಳ ಜನಪ್ರಿಯತೆ ಏರಿಕೆಯಾಗುತ್ತಿದೆ. ವಿಶೇಷವಾಗಿ ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳು ಯುವಕರಲ್ಲಿ ತೀವ್ರ ಆಕರ್ಷಣೆಯಾಗಿ ಪರಿಣಮಿಸಿವೆ. ಸುಲಭ ಹಣದ ಕನಸಿನಲ್ಲಿ ಅನೇಕರು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದು, ಕೆಲವರು ಆತ್ಮಹತ್ಯೆಗೂ ದಾರಿ ಮಾಡಿಕೊಟ್ಟಿದೆ
ಇತ್ತೀಚೆಗೆ, ಒಬ್ಬ ಯುವಕ ಬೆಟ್ಟಿಂಗ್ ಆಪ್ ವ್ಯಸನದಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಿಲ್ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.
ಸಮಾಜದಲ್ಲಿ ಆನ್‌ಲೈನ್ ಜೂಜಾಟದ ಗಂಭೀರತೆಯನ್ನು ಮತ್ತೊಮ್ಮೆ ತೋರಿಸಿದೆ.
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ನಿನ್ನೆ (ಆಗಸ್ಟ್ 20, 2025) “ಆನ್‌ಲೈನ್ ಗೇಮಿಂಗ್ ಬಿಲ್, 2025” ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು 'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ವಿಧೇಯಕ - 2025' ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಇದು ಆನ್‌ಲೈನ್ ಜೂಜು, ಬೆಟ್ಟಿಂಗ್ ಮತ್ತು ಹಣಕಾಸು ವಂಚನೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ವಿಧೇಯಕವು ಜಾಹೀರಾತುಗಳನ್ನು ನಿಷೇಧಿಸುತ್ತದೆ ಮತ್ತು ಹಣ ವರ್ಗಾವಣೆಯನ್ನು ಕೂಡ ನಿರ್ಬಂಧಿಸುತ್ತದೆ, ಉಲ್ಲಂಘಿಸುವವರಿಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.
ಇ-ಸ್ಪೋರ್ಟ್ಸ್ ಮತ್ತು ಶಿಕ್ಷಣಾತ್ಮಕ/ಕೌಶಲ್ಯ ಆಧಾರಿತ ಆಟಗಳಿಗೆ ಮಾತ್ರ ಪ್ರೋತ್ಸಾಹ ನೀಡಲಾಗುತ್ತದೆ.
ದೋಷಿಗಳಿಗೆ 3 ವರ್ಷದ ತನಕ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ.ವರೆಗೆ ದಂಡ ವಿಧಿಸಬಹುದು.ಪರಿಣಾಮವಾಗಿ, ₹20,000 ಕೋಟಿಗೂ ಹೆಚ್ಚು ಮೊತ್ತವನ್ನು ಪ್ರತಿವರ್ಷ ಜನರು ಕಳೆದುಕೊಳ್ಳುತ್ತಿರುವ ನಷ್ಟವನ್ನು ತಡೆಗಟ್ಟುವುದು ಸರ್ಕಾರದ ಉದ್ದೇಶವಾಗಿದೆ. ಸಮಾಜದ ಹಿತಾಸಕ್ತಿಗಾಗಿ ತೆಗೆದುಕೊಳ್ಳಲಾದ ಈ ನಿರ್ಧಾರವನ್ನು ಹಲವರು ಪ್ರಶಂಸಿದರೆ.

0 Comments