ವಾಸ್ಕೊ ಡ ಗಾಮಾ – ಭಾರತಕ್ಕೆ ಸಮುದ್ರ ಮಾರ್ಗದಿಂದ ಮೊದಲ ಪ್ರವೇಶ
ಭಾರತದ ಇತಿಹಾಸದಲ್ಲಿ ಮಹತ್ವದ ಹೊಸ ಅಧ್ಯಾಯ ಬರೆದಿದೆ. ಪೋರ್ಟುಗೀಸು ಸಮುದ್ರಸಂಚಾರಿ ವಾಸ್ಕೊ ಡ ಗಾಮಾ, ಇಂದು ಮಲಬಾರ್ ಕರಾವಳಿಯ ಕಾಲಿಕಟ್ ಕೇರಳ
ತಲುಪಿದರು
ಯುರೋಪಿನ ವ್ಯಾಪಾರಿಗಳು ದಕ್ಷಿಣ ಏಷ್ಯಾದ ಮಸಾಲೆಗಳಿಗೆ ತೀವ್ರ ಆಸಕ್ತಿ ಹೊಂದಿದ್ದರು. ಆದರೆ ಭೂಮಾರ್ಗದಲ್ಲಿ ಅರಬ್ ವ್ಯಾಪಾರಿಗಳ ಏಕಾಏಕಿ ಹಿಡಿತ ಇತ್ತು. ಇದನ್ನು ತಪ್ಪಿಸಲು ಪೋರ್ಟುಗೀಸರು ಹೊಸ ಸಮುದ್ರ ಮಾರ್ಗವನ್ನು ಹುಡುಕಲು ಮುಂದಾದರು.
1497 ಜುಲೈನಲ್ಲಿ ಲಿಸ್ಬನ್‌ನಿಂದ ಹೊರಟರು.ಆಫ್ರಿಕಾ ಖಂಡವನ್ನು ಸುತ್ತಿ, ಗಡ್ ಹೋಪ್ ಕೇಪ್ ಮೂಲಕ ಹಿಂದೂ ಮಹಾಸಾಗರ ಪ್ರವೇಶಿಸಿದರು.ಮೇ 20, 1498ರಂದು ಅವರು ಕಾಲಿಕಟ್ ಕರಾವಳಿಗೆ ತಲುಪಿದರು
ಕಾಲಿಕಟ್‌ನ ಝಮೋರಿನ್ (ಸ್ಥಳೀಯ ರಾಜ) ವಾಸ್ಕೊ ಡ ಗಾಮಾವನ್ನು ಸ್ವಾಗತಿಸಿದರು.
ಅವರು ಮಸಾಲೆ ವ್ಯಾಪಾರಕ್ಕಾಗಿ ಮಾತುಕತೆ ನಡೆಸಿದರು.
ಇದರಿಂದ ಯುರೋಪಿನಿಂದ ನೇರವಾಗಿ ಭಾರತಕ್ಕೆ ಬಂದ ಮೊದಲ ಸಮುದ್ರ ಮಾರ್ಗ ಸ್ಥಾಪನೆಗೊಂಡಿತು.
ಇದು ಭಾರತ ಮತ್ತು ಯುರೋಪಿನ ನಡುವಿನ ನೇರ ವ್ಯಾಪಾರದ ಆರಂಭ.
1498ರಲ್ಲಿ ವಾಸ್ಕೊ ಡ ಗಾಮಾ ಕಾಲಿಕಟ್ ತಲುಪಿದುದು ಭಾರತದ ಭವಿಷ್ಯವನ್ನು ಶಾಶ್ವತವಾಗಿ ಬದಲಿಸಿತು.
ಅದು ಯುರೋಪಿನ ವ್ಯಾಪಾರ ಹಾಗೂ ರಾಜಕೀಯ ಹಸ್ತಕ್ಷೇಪದ ಪ್ರಾರಂಭವಾಗಿದ್ದು, ನಂತರದ ಬ್ರಿಟಿಷರ ಆಳ್ವಿಕೆಗೆ ಕಾರಣವಾಯಿತು.
ಭಾರತಕ್ಕೆ ಬ್ರಿಟೀಷರ ಆಗಮನ
ಭಾರತದಲ್ಲಿ ಬ್ರಿಟೀಷರ ಆಗಮನವು 17ನೇ ಶತಮಾನದಲ್ಲಿ ಆರಂಭವಾಯಿತು. ಮೂಲತಃ ಅವರು ವ್ಯಾಪಾರ ಉದ್ದೇಶದಿಂದ ಬಂದರು, ನಿಧಾನವಾಗಿ ರಾಜಕೀಯ ಮತ್ತು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ನಂತರ ದೇಶವನ್ನು ಸಂಪೂರ್ಣವಾಗಿ ತಮ್ಮ ಆಳ್ವಿಕೆಗೆ ಒಳಪಡಿಸಿದರು.
ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ (1600)
1600ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್–I, ಈಸ್ಟ್ ಇಂಡಿಯಾ ಕಂಪನಿಗೆ ವಿಶೇಷ ಚಾರ್ಟರ್ ನೀಡಿದರು.
ಈ ಕಂಪನಿಯ ಮುಖ್ಯ ಉದ್ದೇಶ ಭಾರತ ಮತ್ತು ಪೂರ್ವದೇಶಗಳೊಂದಿಗೆ ವ್ಯಾಪಾರ ನಡೆಸುವುದು ಆಗಿತ್ತು.
ಪ್ರಮುಖವಾಗಿ ಮಸಾಲೆ, ಹತ್ತಿ, ರೇಷ್ಮೆ, ನಿಲಿಗೆ ಇವುಗಳ ವ್ಯಾಪಾರ ಗುರಿಯಾಗಿತ್ತು.ಅಂದಿನಿಂದಲೇ ಇಂಗ್ಲೆಂಡಿನ ವ್ಯಾಪಾರಿಗಳು ಭಾರತವನ್ನು ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಿದರು
ಭಾರತದಲ್ಲಿ ಮೊದಲ ವಾಣಿಜ್ಯ ಕೇಂದ್ರ (1608 – 1615)
1608ರಲ್ಲಿ ಸೂರತ್‌ನಲ್ಲಿ ಬ್ರಿಟೀಷರು ತಮ್ಮ ಮೊದಲ ವಾಣಿಜ್ಯ ಕೇಂದ್ರ (Factory) ಸ್ಥಾಪಿಸಿದರು.ಬಳಿಕ 1615ರಲ್ಲಿ ಸರ್ ಥಾಮಸ್ ರೋ, ಮೊಘಲ್ ಚಕ್ರವರ್ತಿ ಜಹಾಂಗೀರ್ ಅವರ ದರ್ಬಾರಿಗೆ ಬಂದು ಶಾಶ್ವತ ವ್ಯಾಪಾರದ ಅನುಮತಿ ಪಡೆದರು.
ಇದರಿಂದ ಬ್ರಿಟೀಷರ ವ್ಯಾಪಾರ ಚಟುವಟಿಕೆಗಳಿಗೆ ಕಾನೂನು ಮಾನ್ಯತೆ ದೊರಕಿತು.
ವ್ಯಾಪಾರ ಕೇಂದ್ರಗಳ ವಿಸ್ತರಣೆ (1639 – 1690)
ವ್ಯಾಪಾರದ ಬಲವನ್ನು ಹೆಚ್ಚಿಸಲು ಬ್ರಿಟೀಷರು ಕರಾವಳಿಯ ಪ್ರಮುಖ ಪಟ್ಟಣಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿದರು.
1639 – ಮದ್ರಾಸ್ (ಇಂದಿನ ಚೆನ್ನೈ)
1668 – ಬಾಂಬೆ (ಮುಂಬೈ, ಪೋರ್ಟುಗೀಸರಿಂದ ಇಂಗ್ಲೆಂಡಿಗೆ ಬಂದಿತು)
1690 – ಕಲ್ಕತ್ತಾ (ಇಂದಿನ ಕೋಲ್ಕತಾ)
ಯುದ್ಧಗಳು ಮತ್ತು ಅಧಿಕಾರ ವಿಸ್ತರಣೆ (1757 – 1764)
ಬ್ರಿಟೀಷರು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ, ರಾಜಕೀಯದಲ್ಲೂ ತೊಡಗಿಕೊಂಡರು.
1757 – ಪ್ಲಾಸಿ ಯುದ್ಧ: ರಾಬರ್ಟ್ ಕ್ಲೈವ್ ನೇತೃತ್ವದ ಬ್ರಿಟೀಷರು, ಬಂಗಾಳ ನವಾಬ್ ಸಿರಾಜ್ ಉದ್ ದೌಲಾನನ್ನು ಸೋಲಿಸಿದರು. ಇದು ಬ್ರಿಟೀಷರ ರಾಜಕೀಯ ಪ್ರಭುತ್ವದ ಆರಂಭವಾಗಿತು.
1764 – ಬಕ್ಸರ್ ಯುದ್ಧ: ಬಂಗಾಳ, ಬಿಹಾರ ಮತ್ತು ಒಡಿಶಾದ “ದಿವಾನಿ ಹಕ್ಕು” ಕಂಪನಿಗೆ ದೊರಕಿತು. ಅಂದರೆ, ತೆರಿಗೆ ಸಂಗ್ರಹಣೆಯ ಹಕ್ಕು ಬ್ರಿಟೀಷರ ಕೈಗೆ ಹೋಯಿತು
ಈ ಯುದ್ಧಗಳಿಂದ ಬ್ರಿಟೀಷರು ವ್ಯಾಪಾರಿಗಳಿಂದ ಆಡಳಿತಗಾರರಾಗಿ ಬದಲಾದರು.
1757ರಿಂದ 1857ರವರೆಗೆ ಭಾರತವನ್ನು ಈಸ್ಟ್ ಇಂಡಿಯಾ ಕಂಪನಿ ಆಳುತ್ತಿತ್ತು.
1857ರ ಸಿಪಾಯಿ ದಂಗೆ – ಭಾರತದ ಪ್ರಥಮ ಸ್ವಾತಂತ್ರ್ಯ ಸಮರ
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಭಾರತದಲ್ಲಿ ಕ್ರಮೇಣ ವಿಸ್ತರಿಸುತ್ತಿತ್ತು.
ರೈತರಿಗೆ ಅತಿಯಾದ ತೆರಿಗೆ, ಸೈನಿಕರಿಗೆ ವೇತನ-ಸೌಲಭ್ಯಗಳಲ್ಲಿ ಅನ್ಯಾಯ, ಸಂಸ್ಥಾನಗಳ ವಿಲೀನ, ಧಾರ್ಮಿಕ ಹಸ್ತಕ್ಷೇಪ – ಇವೆಲ್ಲವೂ ಜನರ ಅಸಮಾಧಾನಕ್ಕೆ ಕಾರಣವಾಗಿತ್ತು.
1857ರಲ್ಲಿ ಬಂದ ಹೊಸ ಎನ್ಫೀಲ್ಡ್ ತೋಕು ಕಾರ್ಟ್ರಿಡ್ಜ್ ಮೇಲೆ ಹಸು ಮತ್ತು ಹಂದಿ ಕೊಬ್ಬು ಬಳಕೆ ಆಗಿದೆ ಎಂಬ ಸುದ್ದಿ ಹರಡಿತು. ಇದು ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಭಾರೀ ರೀತಿ ಕೆಣಕಿತು.
ದಂಗೆಯ ಪ್ರಾರಂಭ (ಮೇ 10, 1857 – ಮೀರಟ್)
ಮೇ 10ರಂದು ಮೀರಟ್‌ನಲ್ಲಿ ಭಾರತೀಯ ಸಿಪಾಯಿಗಳು ಬಂಡೆ ಎದ್ದರು.
ಅವರು ದೆಹಲಿಗೆ ಮೆರವಣಿಗೆ ನಡೆಸಿ, ಮುಗಲ್ ಚಕ್ರವರ್ತಿ ಬಹದೂರ್ ಶಾ ಜಫರ್ ಅವರನ್ನು ತಮ್ಮ ನಾಯಕರನ್ನಾಗಿ ಘೋಷಿಸಿದರು.
ಅಲ್ಲಿಂದ ದಂಗೆ ಉತ್ತರ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕವಾಗಿ ಹರಡಿತು.
ಪ್ರಮುಖ ನಾಯಕರು ಮತ್ತು ಕೇಂದ್ರಗಳು
ಝಾನ್ಸಿ → ರಾಣಿ ಲಕ್ಷ್ಮೀಬಾಯಿ – ಶೂರತೆಯ ಪ್ರತೀಕ.
ಕಾನ್ಪುರ → ನಾನಾಸಾಹೇಬ್ ಪೇಶ್ವಾ, ತಾತ್ಯ ಟೋಪಿ.
ಲಖ್ನೌ → ಬೇಗಂ ಹಜ್ರತ್ ಮಹಲ್.
ಬಿಹಾರ → ಕುಮಾರ್ ಕುನ್ವರ್ ಸಿಂಗ್.
ದೆಹಲಿ → ಬಹದೂರ್ ಶಾ ಜಫರ್.
ಬ್ರಿಟೀಷರು ಪ್ರಾರಂಭದಲ್ಲಿ ಸಂಕಷ್ಟಕ್ಕೊಳಗಾದರೂ, ನಿಧಾನವಾಗಿ ದಂಗೆಯನ್ನು ಕುಂಠಿತಗೊಳಿಸಿದರು.
ದಿಲ್ಲಿವನ್ನು ಪುನಃ ವಶಕ್ಕೆ ಪಡೆದು, ಬಹದೂರ್ ಶಾ ಜಫರ್ ಅವರನ್ನು ಬಂಧಿಸಿ ಮ್ಯಾನ್ಮಾರ್‌ಗೆ ದಂಡಿಸಲಾಯಿತು.
ರಾಣಿ ಲಕ್ಷ್ಮೀಬಾಯಿ ಯುದ್ಧದಲ್ಲಿ ವೀರಗತಿಯಾಯಿತು, ತಾತ್ಯ ಟೋಪಿ ಗುರಿಲ್ಲಾ ಯುದ್ಧ ನಡೆಸಿದರೂ ನಂತರ ಬಂಧಿಸಲ್ಪಟ್ಟು ದಂಡಿಸಲ್ಪಟ್ಟರು.
1857ರ ಸಿಪಾಯಿ ದಂಗೆ ಕೇವಲ ಒಂದು ಬಂಡೆ ಅಲ್ಲ; ಅದು ಭಾರತದ ಸ್ವಾತಂತ್ರ್ಯದ ಮೊದಲ ಘೋಷಣೆ.
👉ಇದು ಬ್ರಿಟೀಷರನ್ನು ನಡುಗಿಸಿದರೂ, ಅವರಿಗೆ ನೇರ ಆಳ್ವಿಕೆ ಮಾಡಲು ಕಾರಣವಾಯಿತು.
ಈ ದಂಗೆಯ ಬೆಂಕಿ, 1947ರ ಸ್ವಾತಂತ್ರ್ಯದವರೆಗೆ ಭಾರತೀಯರಲ್ಲಿ ಹೊತ್ತಿ ಉರಿಯುತ್ತಲೇ ಇತ್ತು
ಸಿಪಾಯಿ ಬಂಡೆಯ ನಂತರ ದೊಡ್ಡ ಬದಲಾವಣೆ: ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆ ರದ್ದು – ಭಾರತವನ್ನು ನೇರವಾಗಿ ಇಂಗ್ಲೆಂಡ್ ಸರ್ಕಾರದ ಅಡಿಪಾಯಕ್ಕೆ ತೆಗೆದುಕೊಂಡಿತು
ಹಿನ್ನೆಲೆ
1857ರ ಸಿಪಾಯಿ ದಂಗೆಯ ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಂಡ ಇಂಗ್ಲೆಂಡ್ ಸರ್ಕಾರ, ಭಾರತದ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಲು ನಿರ್ಧರಿಸಿತು.
1858ರ ಭಾರತ ಸರ್ಕಾರ ಕಾಯ್ದೆ (Government of India Act, 1858)
ಈ ಕಾಯ್ದೆಯ ಮೂಲಕ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಸಂಪೂರ್ಣವಾಗಿ ರದ್ದು ಮಾಡಲಾಯಿತು.
ಭಾರತದ ಆಡಳಿತವನ್ನು ನೇರವಾಗಿ ಬ್ರಿಟಿಷ್ ಕ್ರೌನ್ (ಇಂಗ್ಲೆಂಡ್ ರಾಜಮನೆತನ) ತನ್ನ ಹಸ್ತಕ್ಕೆ ತೆಗೆದುಕೊಂಡಿತು.
"Secretary of State for India" ಎಂಬ ಹೊಸ ಹುದ್ದೆ ರಚಿಸಲಾಯಿತು, ಇವರು ಲಂಡನ್‌ನಿಂದಲೇ ಭಾರತದ ಎಲ್ಲಾ ಆಡಳಿತ, ಹಣಕಾಸು ಮತ್ತು ನೀತಿಗಳನ್ನು ನಿರ್ಧರಿಸುತ್ತಿದ್ದರು.
ಭಾರತದಲ್ಲಿ ವೈಸ್ರಾಯ್ (Viceroy of India) ನೇಮಕ ಮಾಡಲಾಯಿತು. ಮೊದಲ ವೈಸ್ರಾಯ್ ಲಾರ್ಡ್ ಕ್ಯಾನಿಂಗ್.
ಬದಲಾವಣೆಗಳು:
1. ಕಂಪನಿಯ ಆಳ್ವಿಕೆ ಅಂತ್ಯ – 1600ರಿಂದ ವ್ಯಾಪಾರ ಆರಂಭಿಸಿ, 1757ರಿಂದ 1857ರವರೆಗೆ ರಾಜಕೀಯ ಪ್ರಭಾವ ಸಾಧಿಸಿದ್ದ ಕಂಪನಿಯ ಆಳ್ವಿಕೆ ಶಾಶ್ವತವಾಗಿ ಮುಕ್ತಾಯವಾಯಿತು.
2. ಭಾರತದಲ್ಲಿ ಹೊಸ ಆಡಳಿತ ರಚನೆ –
ಗವರ್ನರ್ ಜನರಲ್ ಹುದ್ದೆಯ ಬದಲು ವೈಸ್ರಾಯ್ ಹುದ್ದೆ.
ವೈಸ್ರಾಯ್ ನೇರವಾಗಿ ಇಂಗ್ಲೆಂಡ್ ರಾಣಿ/ರಾಜನ ಪ್ರತಿನಿಧಿ.
3. ಭಾರತೀಯರ ಮೇಲಿನ ಭರವಸೆ – ಬ್ರಿಟಿಷರು ಭಾರತೀಯರ ಧಾರ್ಮಿಕ ನಂಬಿಕೆ, ಸಂಪ್ರದಾಯಗಳನ್ನು ಗೌರವಿಸುವುದಾಗಿ ಭರವಸೆ ನೀಡಿದರು.
4. ಸೈನ್ಯದಲ್ಲಿ ಬದಲಾವಣೆ – ಭಾರತೀಯ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಿ, ಬ್ರಿಟಿಷ್ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿದರು.
5. ರಾಜಮನೆತನಗಳಿಗೆ ಭರವಸೆ – ನಿಷ್ಠೆಯಿಂದ ಇರುವ ಪ್ರಾಂತ್ಯಗಳ ರಾಜಮನೆತನಗಳನ್ನು ಉಳಿಸಿ, ಅವರಿಗೆ ರಕ್ಷಣೆಯ ಭರವಸೆ ನೀಡಲಾಯಿತು.
ಭಾರತದಲ್ಲಿ ಬ್ರಿಟಿಷ್ ರಾಜ್ (1858 – 1947) ಪ್ರಾರಂಭವಾಯಿತು.
ಇಂಗ್ಲೆಂಡ್‌ನ ರಾಣಿ ವಿಕ್ಟೋರಿಯಾ ಅವರನ್ನು ಭಾರತದ ಚಕ್ರವರ್ತಿನಿಯಾಗಿ ಘೋಷಿಸಲಾಯಿತು (1877ರಲ್ಲಿ ಅಧಿಕೃತ ಘೋಷಣೆ).
ಭಾರತದ ಎಲ್ಲಾ ರಾಜಕೀಯ, ಆರ್ಥಿಕ, ಸೈನಿಕ ನಿರ್ಧಾರಗಳು ಈಗ ಲಂಡನ್‌ನಲ್ಲೇ ನಡೆಯುತ್ತವೆ.
ಸ್ವಾತಂತ್ರ್ಯ ಹೋರಾಟದ ಮುಂದಿನ ಹಾದಿ ಇನ್ನಷ್ಟು ಕಠಿಣವಾಯಿತು, ಆದರೆ ಜನರಲ್ಲಿ ಜಾಗೃತಿ ಹೆಚ್ಚಾಯಿತು
1885: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆ – ಸ್ವಾತಂತ್ರ್ಯ ಚಳುವಳಿಯ ನಾಂದಿ
ಸ್ಥಾಪನೆಯ ಹಿನ್ನೆಲೆ
19ನೇ ಶತಮಾನದ ಕೊನೆಯಲ್ಲಿ, ಭಾರತದಲ್ಲಿ ವಿದ್ಯಾವಂತರಾದ ಮಧ್ಯಮ ವರ್ಗದವರು ಇಂಗ್ಲಿಷ್ ಶಿಕ್ಷಣ ಪಡೆದು, ರಾಜಕೀಯ ಜಾಗೃತಿಗೆ ಬಂದರು.
ಬ್ರಿಟಿಷ್ ಆಳ್ವಿಕೆಯ ಅನ್ಯಾಯ, ರೈತರಿಗೆ ಬಾಧೆ, ತೆರಿಗೆ ದೌರ್ಜನ್ಯ ಹಾಗೂ ಆಡಳಿತದಲ್ಲಿ ಭಾರತೀಯರಿಗೆ ಅವಕಾಶವಿಲ್ಲದಿರುವುದು ಜನರಲ್ಲಿ ಅಸಮಾಧಾನವನ್ನು ಹೆಚ್ಚಿಸಿತು.
ಇಂಗ್ಲಿಷ್ ಶಿಕ್ಷಣ ಪಡೆದ ಯುವಕರು ಪಾಶ್ಚಾತ್ಯ ರಾಜಕೀಯ ತತ್ವಗಳಿಂದ (ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವ) ಪ್ರೇರಿತರಾದರು.
ಈ ಹಿನ್ನಲೆಯಲ್ಲಿ, ಭಾರತೀಯರಿಗೆ ತಮ್ಮ ಅಭಿಪ್ರಾಯವನ್ನು ಒಗ್ಗೂಡಿಸಿ ಸರ್ಕಾರದ ಮುಂದೆ ಇಡುವ ವೇದಿಕೆಯ ಅವಶ್ಯಕತೆ ಉಂಟಾಯಿತು.
ಸ್ಥಾಪನೆ (1885)
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅನ್ನು 28 ಡಿಸೆಂಬರ್ 1885ರಂದು ಸ್ಥಾಪಿಸಲಾಯಿತು.
ಸ್ಥಳ: ಬಾಂಬೆ (ಇಂದಿನ ಮುಂಬೈ) – ಗೊಕಲ್ದಾಸ್ ತೇಜಪಾಲ್ ಸಂಸ್ಕೃತ ಕಾಲೇಜು ಸಭಾಂಗಣ.
ಸ್ಥಾಪಕ: A.O. ಹ್ಯೂಮ್ (ಬ್ರಿಟಿಷ್ ನಾಗರಿಕ ಸೇವಾ ಅಧಿಕಾರಿ).
ಮೊದಲ ಸಭೆಗೆ ಸುಮಾರು 72 ಪ್ರತಿನಿಧಿಗಳು ಭಾಗವಹಿಸಿದರು.
ಮೊದಲ ಅಧ್ಯಕ್ಷ: ವೋಮೇಶ್ ಚಂದ್ರ ಬಾನರ್ಜಿ.
ಮೊದಲ ಹಂತದ ಉದ್ದೇಶಗಳು (1885 – 1905)
ಈ ಹಂತವನ್ನು "ಮಿತವ್ಯಯಿಗಳ ಹಂತ" (Moderates Phase) ಎಂದು ಕರೆಯುತ್ತಾರೆ.
ಬ್ರಿಟಿಷ್ ಸರ್ಕಾರದ ಮೇಲೆ ನೇರ ಹೋರಾಟ ಮಾಡುವುದಕ್ಕಿಂತ ಸುಧಾರಣೆಗಳನ್ನು ಕೇಳುವುದು.
ಮನವಿ ಪತ್ರ, ಪ್ರಾರ್ಥನೆ, ಮನವೊಲಿಸುವ ನೀತಿ ಮೂಲಕ ಹಕ್ಕುಗಳನ್ನು ಪಡೆಯಲು ಪ್ರಯತ್ನ.
ಪ್ರಮುಖ ನಾಯಕರು: ದಾದಾಭಾಯಿ ನವ್ರೋಜಿ, ಗೋಖಲೇ, ಫಿರೋಜ್ ಶಾ ಮೆಹತಾ, ಸುರೇಂದ್ರನಾಥ ಬ್ಯಾನರ್ಜಿ.
ಮುಖ್ಯ ಬೇಡಿಕೆಗಳು:
ಶಾಸನ ಮಂಡಳಿಗಳಲ್ಲಿ ಭಾರತೀಯರ ಪಾಲು ಹೆಚ್ಚಿಸುವುದು.
ಉದ್ಯೋಗಗಳಲ್ಲಿ ಭಾರತೀಯರಿಗೆ ಹೆಚ್ಚಿನ ಅವಕಾಶ.
ರೈತರ ಮೇಲಿನ ತೆರಿಗೆ ಕಡಿಮೆ ಮಾಡುವುದು.
ಭಾರತದಲ್ಲೇ ಇಂಗ್ಲೀಷರ ಶೈಲಿಯ ಆಡಳಿತ ಸುಧಾರಣೆ.
ಮಿತವ್ಯಯಿಗಳಿಂದ ಕ್ರಾಂತಿಕಾರಿಗಳತ್ತ (1905 ನಂತರ)
1905ರ ಬಂಗಾಳ ವಿಭಜನೆಯ ನಂತರ, ಕಾಂಗ್ರೆಸ್‌ನಲ್ಲಿ ಕ್ರಾಂತಿಕಾರಿ ರಾಷ್ಟ್ರವಾದಿಗಳ ಹಂತ ಆರಂಭವಾಯಿತು.
ಬಲಿಷ್ಠ ನಾಯಕರು: ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತ್ ರೈ (ಲಾಲ್-ಬಾಲ-ಪಾಲ್).
"ಸ್ವರಾಜ್ ನಮ್ಮ ಹಕ್ಕು – ನಾವು ಅದನ್ನು ಪಡೆಯುತ್ತೇವೆ!" ಎಂಬ ಘೋಷಣೆ ಜನರಲ್ಲಿ ಪ್ರಚಲಿತವಾಯಿತು.
ಐತಿಹಾಸಿಕ ಮಹತ್ವ
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಭಾರತದಲ್ಲಿ ಸಂಘಟಿತ ರಾಷ್ಟ್ರೀಯ ಚಳುವಳಿಯ ನೆಲೆಗಟ್ಟಾಯಿತು.
ಇದು ಭಾರತೀಯರಿಗೆ ತಮ್ಮ ಸಮಸ್ಯೆಗಳನ್ನು ಒಗ್ಗೂಡಿಸಿ ಸರ್ಕಾರದ ಮುಂದೆ ಇಡುವ ವೇದಿಕೆಯನ್ನು ನೀಡಿತು.
ಆರಂಭದಲ್ಲಿ ಸುಧಾರಣೆಗಳಿಗೆ ಮಾತ್ರ ಒತ್ತಾಯಿಸಿದ್ದರೂ, ನಂತರ ಸ್ವಾತಂತ್ರ್ಯದ ಪ್ರಬಲ ಚಳುವಳಿಗೆ ಮಾರ್ಪಟ್ಟಿತು.
ಮುಂದುವರೆಯುವುದು.....!


0 Comments