📣ರಾಜ್ಯ ರಾಜಧಾನಿಯಲ್ಲಿ ಭಜನೆಯ ಝೇಂಕಾರ💫

 

ಭಜನೆ

 ಆಧುನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ, ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಜನರು ಪ್ರಪಂಚವೇ ಬೆರಳ ತುದಿಯಲ್ಲಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವದಿಂದ  ಇಂದಿನ ಪೀಳಿಗೆ ಆಧುನಿಕ ಜೀವನಶೈಲಿಯ ಈ ಗದ್ದಲದ ಮಧ್ಯೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮರೆಯುತ್ತಿರುವ ಸಂದರ್ಭದಲ್ಲಿ

ವಿವಿಧ ಊರುಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಉತ್ಸಾಹಿ, ಸಮಾನ ಮನಸ್ಕ ಯುವಕರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಟ್ಟಿದ ಭಜನ ತಂಡವೇ  "ಶ್ರೀರಾಮ ಭಜನಾ ಮಂಡಳಿ ಬೆಂಗಳೂರು "

ಇವರು ದಿನಾಂಕ 10/05/2022 ರಾಮನವಮಿ  ದಿನ 4-5 ಉತ್ಯಾಹಿ ಯುವಕರು ಒಗೂಡುವಿಕೆಯೊಂದಿಗೆ  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೊಸರೋಡ್ ನಲ್ಲಿ ಪ್ರಾರಂಭಗೊಂಡ ಈ ಭಜನ  ತಂಡವು ಇಂದು  ಹಲವು ಭಜಕರನ್ನು ಒಳಗೊಂಡ ಬೃಹತ್ ತಂಡವಾಗಿ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಪ್ರತಿ ಮಾಸಿಕ ಭಜನೆಯು ಕಿಶೋರ್ ಎಣ್ಮೂರು ಇವರ ನಿವೇಶನದಲ್ಲಿ ನಡೆಯುತ್ತಿದ್ದು, ಭಜನೆಯ ಜೊತೆಗೆ ಅನ್ನದಾನ ಸೇವೆಯನ್ನು ಎಲ್ಲ ಯುವಕರ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಕಿಶೋರ್ ಎಣ್ಮೂರು ಅವರ ಮುಂದಾಳತ್ವದಲ್ಲಿ ಎಲ್ಲಾ ಭಜಕರ ಸಹಕಾರದೊಂದಿಗೆ ಈ ಸೇವೆ ಯಶಸ್ವಿಯಾಗಿ ಸಾಗುತ್ತಿದೆ.

ಬೆಂಗಳೂರಿನ ಯಾವುದೇ  ಪ್ರದೇಶಕ್ಕೆ ಭಜನಾ ಸಂಕೀರ್ತನೆಗೆ ಆಹ್ವಾನ ಕೊಟ್ಟರು, ಯಾವುದೇ ಫಲಾಪೇಕ್ಷೆ ಇಲ್ಲದೆ ಭಕ್ತಿಯಿಂದ ಹೋಗಿ ಭಜನಾ ಸೇವೆಯನ್ನು ನೀಡಿಕೊಂಡು ಬಂದಿರುತ್ತದೆ ಈ ತಂಡ.

ಭಕ್ತಿಯೊಂದಿಗೆ ಸಮಾಜ ಸೇವೆ ಎಂಬಂತೆ ಭಜನಾ ಮಂಡಳಿಯ ಭಜಕರಿಗೆ ಆಪತ್ತಿನಕಾಲದಲ್ಲಿ ತನ್ನ ಕೈಲಾದಷ್ಟು ಧನ ಸಹಾಯದ ನೆರವನ್ನು ಭಜನಾ ಮಂಡಳಿಯ ಮುಖೇನ ನೀಡಿಕೊಂಡು ಬಂದಿರುತ್ತದೆ.


ಭಜನೆ



ಹರ್ ಘರ್ ತಿರಂಗಾ ಎಂಬ ಅಭಿಯಾನ ಶುರುವಾದಗಿನಿಂದ ಯುವಕರೆಲ್ಲರೂ ಸೇರಿಕೊಂಡು ಭಜನಾ ನಿವೇಶನದ ಮೇಲ್ಛಾವಣಿಯಲ್ಲಿ (ಆಗಸ್ಟ್ 15 ಮತ್ತು ಜನವರಿ 26 ರಂದು) ಧ್ವಜಾರೋಹಣವನ್ನು ಮಾಡಿಕೊಂಡು ದೇವರ ಭಕ್ತಿಯ ಜೊತೆಗೆ ದೇಶಭಕ್ತಿಯನ್ನು ಮೆರೆಯುತ್ತಾರೆ.

ಕಳೆದ ಎಪ್ರಿಲ್ 6, ರಾಮ ನವಮಿಯ ದಿನ ಭಜನಾ ಮಂಡಳಿಯು ಮೂರನೇ ವರ್ಷದ ಭಜನಾ ವಾರ್ಷಿಕೋತ್ಸವವನ್ನು "ಭಜನಾಮೃತ" ಎಂಬ ಹೆಸರಿನೊಂದಿಗೆ ಎಲ್ಲಾ ಸಹೃದಯಿ ದಾನಿಗಳ ಸಹಕಾರದಿಂದ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡಿತು.  


Bajane


ಇದಕ್ಕೆಲ್ಲ ಪ್ರೇರಣೆ ಉತ್ತೇಜನವಾಗಿರುವುದು ಹಲವು ಜನರ ಪ್ರಶಂಸೆ ಹಾಗೂ ಮೆಚ್ಚುಗೆಯ ಮಾತುಗಳು ಎಂಬುದು ಭಜನಾ ತಂಡದ ಅಭಿಪ್ರಾಯ.

ಭಜನೆಯಿಂದ ಭಜಕರನ್ನು ಒಂದಾಗಿಸಬೇಕೆಂಬ ಸಂಕಲ್ಪವನ್ನು ಮುಂದಿರಿಸಿಕೊಂಡು ತಮ್ಮ ಜನ್ಮಭೂಮಿಗೆ ನಮಸ್ಕರಿಸಿ ಕರ್ಮಭೂಮಿಗಾಗಮಿಸಿ ಬದುಕು ಕಟ್ಟುವ ಜೊತೆಗೆ ಭಜನೆಯ ಬದುಕಿನೊಡನೆ ಲೀನವಾಗಲು ಯೋಚಿಸಿದ ಸಮಾನ ಮನಸ್ಥ ಭಜಕರ ಗುಂಪಿದು ಎಂದು ಹೇಳಬಹುದು.

ಕನಕದಾಸರು ಹೇಳುವಂತೆ "ಕಲಿಯುಗದಲ್ಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ದಾರಿಸುವವು"

ಭಜನೆಯು ದೈನಂದಿನ ಜೀವನದ ಒತ್ತಡ ಮತ್ತು ಗೊಂದಲಗಳಿಂದ ಹೊರಬರಲು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಿರುವ ಶ್ರೇಷ್ಠ ಮಾರ್ಗವಾಗಿದೆ.

ಇದು ನಮ್ಮಲ್ಲಿ ಶಾಂತಿ, ನೆಮ್ಮದಿ ಮತ್ತು ಆಧ್ಯಾತ್ಮಿಕ ತೃಪ್ತಿಯನ್ನು ನೀಡುವುದರ ಜೊತೆಗೆ ನಮ್ಮ ಸಂಸ್ಕೃತಿಯೊಂದಿಗೆ ಸದಾ ನಿರಂತರ ಸಂಪರ್ಕದಲ್ಲಿ ಇಡುತ್ತದೆ.ಭಜನೆಯ ಈ ಒಗ್ಗಟ್ಟೇ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಯಾಗುತ್ತದೆ.

“ಭಜನೆಯ ರಾಗದಲ್ಲಿ ಭಕ್ತಿ, ಭಕ್ತಿಯ ದಾರಿಯಲ್ಲಿ ಸಮಾಜಸೇವೆ, ಸಮಾಜಸೇವೆಯ ಮೂಲಕ ದೇಶಸೇವೆ – ಇದೇ ನಮ್ಮ ಶ್ರೀ ರಾಮ ಭಜನಾ ಮಂಡಳಿಯ ಧ್ಯೇಯ.”ವಾಗಿದೆ ಎಂದು ಹೇಳಬಹುದು.

“ಆ ದೇವರು ಇನ್ನಷ್ಟು ಶಕ್ತಿ, ಭಕ್ತಿ ಮತ್ತು ಅರೋಗ್ಯ ನೀಡಲಿ. ಭಜನೆಯ ಮೂಲಕ ಸಮಾಜಸೇವೆ ಮಾಡಿ, ಜನಮನಗಳಲ್ಲಿ ಶಾಂತಿ, ನೆಮ್ಮದಿ ಹರಡುತ್ತಾ, ಸಂಸ್ಕೃತಿ ಉಳಿಸಿ ಬೆಳೆಸುವ ಮಹೋನ್ನತ ಕಾರ್ಯ ಸದಾ ಮುಂದುವರಿಯಲಿ ಎಂದು ಹಾರೈಸುವ.






Post a Comment

0 Comments