📳ಏರ್‌ಟೆಲ್ ಮತ್ತೆ ಡೌನ್ – ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸೇವಾ ವ್ಯತ್ಯಯ📶

Airtel

 ಭಾರತದ ಪ್ರಮುಖ ಟೆಲಿಕಾಂ ಸೇವಾಪೂರೈಕೆದಾರರಾದ ಏರ್‌ಟೆಲ್ ಮತ್ತೆ ಸೇವಾ ವ್ಯತ್ಯಯಕ್ಕೆ ಒಳಗಾಗಿದೆ. ಭಾನುವಾರ (ಆಗಸ್ಟ್ 24) ಬೆಳಿಗ್ಗೆಯಿಂದಲೇ ಬೆಂಗಳೂರಿನ ಜೊತೆಗೆ ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳ ಬಳಕೆದಾರರು ಕರೆ ಹಾಗೂ ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎದುರಿಸಿದ್ದಾರೆ.


Downdetector ವೆಬ್‌ಸೈಟ್ ಪ್ರಕಾರ ಮಧ್ಯಾಹ್ನ 12:11ಕ್ಕೆ ಒಟ್ಟು 6,818 ದೂರುಗಳು ದಾಖಲಾಗಿದ್ದು, ಇದರಲ್ಲಿ ಇಂಟರ್ನೆಟ್  ಫೋನ್ , ವೈ-ಫೈ , ಸಂಪೂರ್ಣ ಸಂಪರ್ಕ ಕಡಿತ  ಹಾಗೂ ಇ-ಮೇಲ್ ಸಮಸ್ಯೆಗಳು ಸೇರಿವೆ.


ಈ ಘಟನೆ ಬಳಿಕ #AirtelDown ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣ X (Twitter) ನಲ್ಲಿ ಟ್ರೆಂಡ್ ಆಗಿದ್ದು, “ಕರೆಗಳು ಹೋಗುತ್ತಿಲ್ಲ”, “ಇಂಟರ್ನೆಟ್ ತುಂಬಾ ನಿಧಾನ”, “ಬ್ರಾಡ್‌ಬ್ಯಾಂಡ್ ಸಹ ಕೆಲಸ ಮಾಡುತ್ತಿಲ್ಲ” ಎಂಬ ಅಸಮಾಧಾನ ವ್ಯಕ್ತವಾಗಿದೆ.


Airtel ತನ್ನ ಪ್ರತಿಕ್ರಿಯೆಯಲ್ಲಿ ಇದು ತಾತ್ಕಾಲಿಕ ಸಂಪರ್ಕ ವ್ಯತ್ಯಯವಾಗಿದ್ದು, ಒಂದು ಗಂಟೆಯೊಳಗೆ ಪುನಃಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದೆ. ಸೇವೆ ಮರಳಿ ಬಂದ ನಂತರ ಮೊಬೈಲ್ ರೀಸ್ಟಾರ್ಟ್ ಮಾಡಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ.

Post a Comment

0 Comments