ಪುತ್ತೂರು: "VISIONINDIA 15th MONTH BUMPER DRAW” ಎಂಬ ಹೆಸರಿನ ನಿಷೇಧಿತ ಲಕ್ಕಿ ಸ್ಕೀಮ್ ಅನ್ನು ಅಕ್ರಮವಾಗಿ ನಡೆಸುತ್ತಿದ್ದ ಮಂಗಳೂರಿನ ಸಲಾಂ ಮತ್ತು ಅಜೀಜ್ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸಾರ್ವಜನಿಕರಿಗೆ ಒಮ್ಮೆ ₹23,000 ಹೂಡಿಕೆ ಮಾಡಿದರೆ ಕಾರು, ಚಿನ್ನ, ನಗದು, ಮೊಬೈಲ್, ಫ್ರಿಜ್ ಸೇರಿದಂತೆ ಬಂಪರ್ ಬಹುಮಾನಗಳನ್ನು ನೀಡುವುದಾಗಿ ಆಮಿಷವೊಡ್ಡಿ ಹಣ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಜನಾರ್ಧನ ಕೆ.ಎಂ. ಅವರು ಅಕ್ಟೋಬರ್ 27ರಂದು ಸಂಜೆ 4:30ರ ಸುಮಾರಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಸಾರ್ವಜನಿಕರು ಗುಂಪುಗೂಡಿ ಕೆಲವು ಕರಪತ್ರಗಳನ್ನು ನೋಡಿಕೊಂಡು ಈ ಲಕ್ಕಿ ಚಿಟ್‌ಫಂಡ್ ಬಗ್ಗೆ ಮಾತನಾಡುತ್ತಿರುವುದನ್ನು ಗಮನಿಸಿದ್ದಾರೆ.
VISIONINDIA 15th MONTH BUMPER DRAW 1 LAKH CASH WINNERS ಎಂಬ ಈ ಸ್ಕೀಮ್‌ನಲ್ಲಿ ಒಂದು ಬಾರಿ ರೂ. 23,000/- ಹೂಡಿಕೆ ಮಾಡಿದರೆ ಕಾರು, ಚಿನ್ನಾಭರಣ, ನಗದು, ಮೊಬೈಲ್, ಫ್ರಿಜ್, ಗೃಹೋಪಯೋಗಿ ವಸ್ತುಗಳು ಸಿಗುತ್ತವೆ ಎಂದು ಚರ್ಚಿಸುತ್ತಿದ್ದುದನ್ನು ಕೇಳಿದ್ದಾರೆ.
ಜನಾರ್ಧನ ಅವರು ಕರಪತ್ರವನ್ನು ಪರಿಶೀಲಿಸಿದಾಗ, ಅದರಲ್ಲಿ ಸಂಸ್ಥೆಯ ಯಾವುದೇ ಕಚೇರಿ ವಿಳಾಸ ಇರಲಿಲ್ಲ. ಈ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ, ಈ ಲಕ್ಕಿ ಡ್ರಾದಲ್ಲಿ ಬಹುಮಾನ ಗೆದ್ದ ಸದಸ್ಯರಿಗೆ ಸೊತ್ತುಗಳನ್ನು ನೀಡಲು ಮಂಗಳೂರಿನ ಸಲಾಂ ಮತ್ತು ಅಜೀಜ್ ಎಂಬುವವರು ಪುತ್ತೂರಿನ ಮಾರುಕಟ್ಟೆ ರಸ್ತೆಯಲ್ಲಿ ಒಂದು ಅಂಗಡಿ ಕೋಣೆಯನ್ನು ಬಾಡಿಗೆಗೆ ಪಡೆದಿರುವ ವಿಷಯ ತಿಳಿದುಬಂದಿದೆ.
ಆರೋಪಿಗಳು ನಿಷೇಧಿತವಾದ ಈ ಸ್ಕೀಮ್ ಅನ್ನು ಅಕ್ರಮವಾಗಿ ನಡೆಸುತ್ತಿರುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದರಿಂದ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ ಸಲಾಂ ಮತ್ತು ಅಜೀಜ್ ಅವರ ವಿರುದ್ಧ ಅ.ಕ್ರಂ. 99/2025: 4, 5, 6 PRIZE CHITS & MONEY CIRCULATION SCHEMES (BANNINGS) ACT-1978 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments