ಪುತ್ತೂರು: ಪುತ್ತೂರು-ಕಾಣಿಯೂರು-ಬಾಳುಗೋಡು ಮಾರ್ಗವಾಗಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಡಬ ತಾಲೂಕಿನ ಕಾಣಿಯೂರಿನ ಮಹಿಳೆಯೊಬ್ಬರ ಸುಮಾರು ರೂ. 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳ್ಳರು ಎಗರಿಸಿರುವ ಘಟನೆ ಅ.27ರಂದು ನಡೆದಿದೆ.
ಕಾಣಿಯೂರು ನಿವಾಸಿಯಾಗಿರುವ ಮಹಿಳೆ ಮತ್ತು ಅವರ ಸಹೋದರಿಯರು ಅಕ್ಟೋಬರ್ 27ರ ಸಂಜೆ 4.17ಕ್ಕೆ ಪುತ್ತೂರು ಬಸ್ ನಿಲ್ದಾಣದಿಂದ ಕಾಣಿಯೂರು-ಬಾಳುಗೋಡು ಬಸ್ ಹತ್ತಿದ್ದರು. ಸಂಜೆ 4.45ರ ಸುಮಾರಿಗೆ ಪ್ರಯಾಣದ ಮಧ್ಯೆ ಮಹಿಳೆಗೆ ತಮ್ಮ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ತಕ್ಷಣವೇ ಕುಟುಂಬಸ್ಥರು ಬಸ್ ಮಾರ್ಗದಲ್ಲಿ ಮತ್ತು ಸವನೂರು, ಕಾಣಿಯೂರು ಸುತ್ತಮುತ್ತ ಹುಡುಕಾಟ ನಡೆಸಿದರೂ ಕಳುವಾದ ಸರದ ಸುಳಿವು ಸಿಕ್ಕಿಲ್ಲ.
ದೂರು ದಾಖಲು ಮತ್ತು ತನಿಖೆ:
ಘಟನೆ ಸಂಬಂಧ ಮಹಿಳೆಯ ಪುತ್ರರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಪೊಲೀಸರು ಅ.ಕ್ರ.: 100/2025, ಕಲಂ 303(2) BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ಬಸ್ ನಿಲ್ದಾಣ ಮತ್ತು ಸುತ್ತಮುತ್ತಲ ಪ್ರದೇಶಗಳ ಸಿ.ಸಿ.ಟಿ.ವಿ. ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಪುತ್ತೂರು ಪೊಲೀಸರು ಕಳವಿನ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments