ಕಡಬ ತಾಲೂಕು ಕೊಡಿಂಬಾಳ ಸಮೀಪದ ಕೋಡಂಕಿರಿ ಮೂಲದ ಪಿ.ಎಮ್. ರಾಮಚಂದ್ರಗೌಡ (54) ಅವರು ಅಲ್ಪಕಾಲದ ಅನಾರೋಗ್ಯದಿಂದ ನವೆಂಬರ್ 17ರಂದು ನಿಧನರಾದರು.
ರಾಮಚಂದ್ರಗೌಡ ಅವರು ಎಣ್ಮೂರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಶಿಸ್ತಿನೊಂದಿಗೆ, ವಿದ್ಯಾರ್ಥಿಗಳ ದೈಹಿಕ ಶಿಕ್ಷಣಕೆ ಮಹತ್ತರ ಕೊಡುಗೆ ನೀಡಿದ ಶಿಕ್ಷಕರಾಗಿ ಅವರು ಪ್ರಸಿದ್ಧರಾಗಿದ್ದರು.
ಮೃತರ ಪತ್ನಿ ಕುಂತೂರುಪದವಿನ ಸೈಂಟ್ ಚಾರ್ಜ್ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ವನಿತಾ, ಜೊತೆಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಸ್ಥಳೀಯರು, ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

0 Comments