ಭಾರತ ಫುಟ್‌ಬಾಲ್ ತಂಡಕ್ಕೆ ರಯಾನ್ ವಿಲಿಯಮ್ಸ್ ಆಯ್ಕೆಗರ್ಹ: FIFA ಅನುಮೋದನೆ

 

Ad

ಪರ್ತ್‌ನಲ್ಲಿ ಜನಿಸಿದ ಆಸ್ಟ್ರೇಲಿಯನ್ ಫಾರ್ವರ್ಡ್ ರಯಾನ್ ವಿಲಿಯಮ್ಸ್ ಇದೀಗ ಅಧಿಕೃತವಾಗಿ ಭಾರತ ಫುಟ್‌ಬಾಲ್ ತಂಡಕ್ಕೆ ಆಯ್ಕೆಗೊಳ್ಳಲು ಅರ್ಹರಾಗಿದ್ದಾರೆ. ಆಸ್ಟ್ರೇಲಿಯಾ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವ ಪಡೆದ ನಂತರ, ಫಿಫಾ ಸದಸ್ಯ ಸಂಸ್ಥೆ ಬದಲಾವಣೆಗೆ ಅನುಮೋದನೆ ನೀಡಿದೆ ಎಂದು ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್ (AIFF) ಪ್ರಕಟಿಸಿದೆ.

ನವೆಂಬರ್ 19, 2025 ರಂದು ಫಿಫಾ ಆಟಗಾರರ ಸ್ಥಿತಿಗತಿ ಚೇಂಬರ್ (Players’ Status Chamber) ವಿಲಿಯಮ್ಸ್ ಅವರ ಸದಸ್ಯ ಸಂಸ್ಥೆ ಬದಲಾವಣೆ ಅರ್ಜಿಯನ್ನು ಅನುಮೋದಿಸಿ ಅಂತಿಮ ತೀರ್ಪು ಪ್ರಕಟಿಸಿದೆ. ಈ ಮೂಲಕ ಅವರು ಅಧಿಕೃತವಾಗಿ ಭಾರತ ರಾಷ್ಟ್ರೀಯ ತಂಡದ ಪರ ಆಡಲು ಅರ್ಹರಾಗಿದ್ದಾರೆ.

32 ವರ್ಷದ ರಯಾನ್ ವಿಲಿಯಮ್ಸ್ ಪ್ರಸ್ತುತ ಬ್ಯಾಂಗಳೂರು ಎಫ್‌ಸಿ ತಂಡದ ಪ್ರಮುಖ ಆಟಗಾರರಾಗಿದ್ದು, 2023ರಲ್ಲಿ ಕ್ಲಬ್‌ ಸೇರಿದ್ದಾರೆ. ಇವರ ತಾಯಿ ಮುಂಬೈ ಮೂಲದವರು ಹಾಗೂ ತಂದೆ ಇಂಗ್ಲೆಂಡ್‌ನ ಕೆಂಟ್ ಪ್ರದೇಶದಲ್ಲಿ ಜನಿಸಿದ್ದಾರೆ.

ವಿಲಿಯಮ್ಸ್ ಈ ಹಿಂದೆ ಆಸ್ಟ್ರೇಲಿಯಾ U-20 ಮತ್ತು U-23 ತಂಡಗಳ ಪರ ಆಡಿದ್ದು, 2019ರಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಸ್ನೇಹಪೂರ್ವಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೀನಿಯರ್ ತಂಡದ ಪರವೂ ಆಡಿದ್ದರು.

ಅದರ ಜೊತೆಗೆ ಇಂಗ್ಲೆಂಡ್‌ನ ಪ್ರಸಿದ್ಧ ಕ್ಲಬ್‌ಗಳಾದ ಫುಲ್ಹ್ಯಾಮ್ ಮತ್ತು ಪೋರ್ಟ್‌ಸ್ಮೌತ್ ತಂಡಗಳಿಗೂ ಅವರು ಪ್ರತಿನಿಧಿಸಿದ್ದಾರೆ.

ಇವರಿಗೆ ಮುಂಚಿತವಾಗಿ ಜಪಾನ್ ಮೂಲದ ಇಜುಮಿ ಅರಾಟಾ 2012ರಲ್ಲಿ ಭಾರತೀಯ ಪೌರತ್ವ ಪಡೆದಿದ್ದು, 2013 ಹಾಗೂ 2014ರಲ್ಲಿ ಭಾರತ ತಂಡದ ಪರ 9 ಪಂದ್ಯಗಳಲ್ಲಿ ಆಡಿದ್ದರು

Post a Comment

0 Comments